has gloss | kan: ಕೇವಲಾದೇವ್ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ. ಇದೊಂದು ಸುಪ್ರಸಿದ್ಧ ಪಕ್ಷಿಧಾಮವಾಗಿದ್ದು ಮೊದಲು ಇದರ ಹೆಸರು ಭರತ್‍ಪುರ್ ಪಕ್ಷಿಧಾಮ ಎಂಬುದಾಗಿತ್ತು. ಕೇವಲಾದೇವ್ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ಚಳಿಗಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೈಬೀರಿಯನ್ ಕೊಕ್ಕರೆಗಳು ವಲಸೆ ಬರುತ್ತವೆ. ಸಾವಿರಾರು ಮೈಲಿ ದೂರದ ಸೈಬೀರಿಯಾದಿಂದ ಇಲ್ಲಿಗೆ ಬರುವ ಈ ಕೊಕ್ಕರೆಗಳು ಇಂದು ಅತಿ ತೀವ್ರವಾಗಿ ಅಳಿವಿನತ್ತ ಸಾಗುತ್ತಿರುವ ಜೀವತಳಿಗಳಲ್ಲಿ ಸೇರಿವೆ. ಸಮಾರು ೨೩೦ ಜಾತಿಯ ಪಕ್ಷಿಗಳು ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ತಮ್ಮ ವಾಸನೆಲೆಯನ್ನಾಗಿಸಿಕೊಂಡಿವೆ. ೧೯೮೫ರಲ್ಲಿ ಯುನೆಸ್ಕೋ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿತು. |